Kodagu, ಜೂನ್ 8 -- ಅತ್ತೂರು ಕೊಲ್ಲಿ( ಕೊಡಗು): ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರೆಉವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಅತ್ತೂರು ಕೊಲ್ಲಿ ಪ್ರದೇಶದಲ್ಲಿ ದಶಕಗಳ ಹಿಂದೆ ವಾಸವಿದ್ದೆವು ಎನ್ನುವ ಕಾರಣ ನೀಡಿ ಈಗ 53 ಕುಟುಂಬಗಳ ಸುಮಾರು 200ಕ್ಕೂ ಅಧಿಕ ಜೇನುಕುರುಬ ಸಮುದಾಯದವರು ಅರಣ್ಯ ಪ್ರವೇಶಿಸಿ ಒಂದು ತಿಂಗಳಿನಿಂದ ವಾಸವಾಗಿದ್ದು, ನಮಗೆ ಇಲ್ಲಿಯೇ ಕಾಯಂ ನೆಲೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ನೀವು ಈಗ ಹೇಳುತ್ತಿರುವುದರಿಂದ ಇಲ್ಲಿ ಯಾವುದೇ ಹಾಡಿ ಇರಲಿಲ್ಲ. ಇದಕ್ಕೆ ದಾಖಲೆಗಳು ಅರಣ್ಯ ಇಲಾಖೆ ಮಾತ್ರವಲ್ಲದೇ ಇತರೆ ಇಲಾಖೆಗಳಲ್ಲೂ ಇಲ್ಲ. ನೀವು ಮೂಲ ನಿವಾಸಿಗಳು ಆಗಿರಬಹುದು. ಆದರೆ ಆ ಪ್ರದೇಶದಲ್ಲಿ ನಿಮ್ಮ ಇರುವಿಕೆಗೆ ಯಾವುದೇ ದಾಖಲೆಗಳು ಇರದ ಕಾರಣಕ್ಕೆ ಇಲ್ಲಿ ಯಾವುದೇ ಕಾರಣಕ್ಕೂ ವಾಸಕ್ಕೆ ಅವಕಾಶ ಇಲ್ಲವೇ ಇಲ್ಲ. ಅಲ್ಲಿಂದ ನೀವು ತೆರವು ಮಾಡಿ ಎಂದು ಅರಣ್ಯ ಇಲಾಖೆಯವರು ಒಂದು ತಿಂಗಳಿನಿಂದ ಮನ ಒಲಿಸುತ್ತಲೇ ಇದ್ದಾರೆ. ಜೀವ ಹೋದರೂ ನಾವು ಅಲ್ಲಿಂದ ಹೋಗುವುದೇ ಇಲ್ಲ ಎಂದು ಜೇನುಕುರುಬರ ಕುಟುಂಬದವರು ಪಟ್ಟು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.