ಭಾರತ, ಜೂನ್ 16 -- ದೊಡ್ಡಬಳ್ಳಾಪುರದ ಕರ್ಣಾಟಕ ಬ್ಯಾಂಕ್‌ನಲ್ಲಿ ಇತ್ತೀಚಿಗೆ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಸದ್ದುಗದ್ದಲವಿಲ್ಲದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ವಿವಿಧ ವ್ಯವಹಾರಗಳಿಗೆಂದು ಬಂದಿದ್ದ ಗ್ರಾಹಕರೇ ಅತಿಥಿಗಳು. ಸಿಬ್ಬಂದಿ ಮತ್ತು ಅಧಿಕಾರಿಗಳು ಒಂದು ರೀತಿಯ ಧನ್ಯತಾ ಭಾವದಲ್ಲಿದ್ದರು. ಕೇವಲ ಗ್ರಾಹಕ-ಸಿಬ್ಬಂದಿ ಸಂಬಂಧಕ್ಕೆ ಹೊರತಾದ ವಾತಾವರಣ ಅಲ್ಲಿತ್ತು. ವಿಷಯ ಇಷ್ಟೇ.

ಬ್ಯಾಂಕಿನ ಗ್ರಾಹಕರಾದ ಎಚ್‌.ಪಿ.ಶ್ಯಾಮ ಪ್ರಸಾದ್ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಕೆಬಿಎಲ್ ಸುರಕ್ಷಾ ವಿಮಾ ಕಂತನ್ನೂ ಕಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿಮಾ ಮೊತ್ತವಾದ ಹತ್ತು ಲಕ್ಷ ರೂಪಾಯಿ ಮತ್ತು ಅವರ ಮಗುವಿನ ವಿದ್ಯಾಭ್ಯಾಸಕ್ಕಾಗಿ ಹೆಚ್ಚುವರಿಯಾಗಿ ಹದಿನೈದು ಸಾವಿರ ರೂಪಾಯಿ ಮೊತ್ತವನ್ನು ನಾಮನಿರ್ದೇಶನ ಮಾಡಿದ್ದ ಶಿವರುದ್ರಮ್ಮ ಅವರಿಗೆ ನೀಡಲಾಯಿತು.

ವಿಮಾ ಮೊತ್ತ ಮತ್ತು ಶಿಕ್ಷಣ ನೆರವಿನ ಚೆಕ್‌ಗಳನ್ನು ಕರ್ಣಾಟಕ ಬ್ಯಾಂಕ್‌ನ ತುಮಕೂರು ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರಾದ ರಾಮಶೇಷು ಅವರು ಹಸ್ತ...