Bengaluru, ಮೇ 5 -- ಎಲ್ಲಾ ಜನರ ಗುಣಧರ್ಮ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಕೋಪ ಹೆಚ್ಚಾಗಿದ್ದರೆ, ಕೆಲವರು ಹೆಚ್ಚು ಹಟ ಮಾಡುತ್ತಾರೆ, ಕೆಲವರೂ ಸೋಂಬೇರಿಗಳಾಗಿರುತ್ತಾರೆ, ಕೆಲವರು ಧೈರ್ಯವಂತರು, ಕೆಲವರು ಬಹಳ ಭಯದ ಸ್ವಭಾವದವರಾಗಿರುತ್ತಾರೆ. ವ್ಯಕ್ತಿಗಳು ಹುಟ್ಟಿದ ದಿನಾಂಕ, ರಾಶಿ, ನಕ್ಷತ್ರದ ಅನುಸಾರ ಅವರ ಗುಣ ನಿರ್ಧಾರವಾಗುತ್ತದೆ.

ಕೆಲವೊಂದು ರಾಶಿಗಳವರು ಇತರರಿಗಿಂತ ಬಹಳ ವಿಭಿನ್ನ ಸ್ವಭಾವದವರಾಗಿರುತ್ತಾರೆ. ಆ ರಾಶಿಗಳ ಬಗ್ಗೆ ತಿಳಿಯೋಣ.

ಮೇಷ ರಾಶಿಯವರು ತಮ್ಮ ಹಠಾತ್ ಪ್ರವೃತ್ತಿ ಮತ್ತು ಕೋಪಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ಭಾವನೆಗಳನ್ನು ನೋಯಿಸುವ ಯಾರೊಂದಿಗೂ ಮಾತನಾಡಲು ಅವರು ಬಯಸುವುದಿಲ್ಲ. ಅವರ ಸ್ಪರ್ಧಾತ್ಮಕ ಮನೋಭಾವವು ಕೆಲವೊಮ್ಮೆ ಅಹಂನಿಂದ ತೊಂದರೆಗೆ ಕಾರಣವಾಗಬಹುದು. ಇತರರು ಅವರೊಂದಿಗೆ ಕೆಲಸ ಮಾಡುವುದು ಅಥವಾ ಸಾಮರಸ್ಯದಿಂದ ಬದುಕುವುದು ಬಹಳ ಸವಾಲಿನ ಸಂಗತಿಯಾಗಿದೆ. ತಮ್ಮ ಜೀವನ ಯಾವುದೇ ಅಡೆ ತಡೆ ಇಲ್ಲದೆ ಸರಾಗವಾಗಿ ಸಾಗಬೇಕೆಂದರೆ ಈ ರಾಶಿಯವರು ತಾಳ್ಮೆಯನ್ನು ಕಲಿಯಬೇಕು.

ಇದನ್ನೂ ಓದಿ: ಸತ್ಯನ...