Bengaluru, ಫೆಬ್ರವರಿ 13 -- ವಸಂತ ಪಂಚಮಿ 2024: ವಿದ್ಯೆಯ ಅಧಿದೇವತೆ ಸರಸ್ವತಿ. ಪ್ರತಿ ವರ್ಷ ಮಾಘ ಮಾಸದಲ್ಲಿ ಸರಸ್ವತಿ ಪೂಜೆಗೆ ಒಂದು ದಿನ ಮೀಸಲಿಡಲಾಗಿದೆ. ಆ ದಿನ ಶಾರದೆಯ ಪೂಜೆ ಮಾಡಿ ತಮಗೆ ವಿದ್ಯೆ ನೀಡುವಂತೆ ಪ್ರಾರ್ಥನೆ ಮಾಡುತ್ತಾರೆ. ಇದನ್ನು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ವಸಂತ ಪಂಚಮಿ ಎಂದೂ ಕರೆಯಲಾಗುತ್ತದೆ.

ಫೆಬ್ರವರಿ 14 ರಂದು ವಸಂತ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಸರಸ್ವತಿ ದೇವಿಯ ಜೊತೆಗೆ ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ವಿಶೇಷ ಆಚರಣೆಯಾಗಿದೆ. ಸರಸ್ವತಿ ದೇವಿಯನ್ನು ಮೆಚ್ಚಿಸಲು ಪೂಜೆಯ ಸಮಯದಲ್ಲಿ ಐದು ವಿಶೇಷ ನೈವೇದ್ಯಗಳನ್ನು ಅರ್ಪಿಸಬೇಕು. ಈ ರೀತಿ ಶಾರದೆಗೆ ಇಷ್ಟವಾದ ನೈವೇದ್ಯ ಇಟ್ಟರೆ ಆಕೆ ಎಲ್ಲರನ್ನೂ ಆಶೀರ್ವದಿಸುತ್ತಾಳೆ. ನಿಮ್ಮ ಜೀವನದಲ್ಲಿನ ದುಃಖಗಳು ದೂರವಾಗುತ್ತವೆ. ಸರಸ್ವತಿ ದೇವಿಯ ಅನುಗ್ರಹದಿಂದ ಜ್ಞಾನ ಮತ್ತು ಮಾತಿನ ದೋಷಗಳು ನಿವಾರಣೆಯಾಗುತ್ತವೆ. ಹಳದಿ ಬಟ್ಟೆ ಮತ್ತು ಹಳದಿ ಸಿಹಿ ತಿಂಡಿಗಳನ್ನು ಅರ್ಪಿಸುವ ಮೂಲಕ ಸರಸ್ವತಿ ದೇವಿಯು ವಿಶೇಷ ಅನುಗ್ರಹವನ್ನು ಪಡೆಯಬಹುದು....