Bangalore, ಮೇ 1 -- ಈಗಾಗಲೇ ಏಪ್ರಿಲ್‌ ತಿಂಗಳಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಈ ಮೇ ತಿಂಗಳಲ್ಲಿ ಯಾವ ಹೊಸ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಿನಿಪ್ರಿಯರು ಕಾಯುತ್ತಿರಬಹುದು. ಶ್ರೀಕಾಂತ್, ಮಿಸ್ಟರ್ ಅಂಡ್ ಮಿಸೆಸ್ ಮಹಿ, ಭೈಯಾ ಜಿ, ದಿ ಫಾಲ್ ಗೈ ಮತ್ತು ಕಿಂಗ್ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಸೇರಿದಂತೆ ಹಲವು ಸಿನಿಮಾಗಳು ಮೇ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಮೇ 2024ರ ಸಿನಿಮಾ ಕ್ಯಾಲೆಂಡರ್‌ ಇಲ್ಲಿದೆ.

ಶ್ರೀಕಾಂತ್ ಬೊಲ್ಲಾ ಬಯೋಪಿಕ್‌ಗೆ ರಾಜ್ ಕುಮಾರ್ ರಾವ್ ಜೀವ ತುಂಬಿದ್ದಾರೆ. ಇವರು ಕೈಗಾರಿಕೋದ್ಯಮಿ. ದೃಷ್ಟಿಹೀನತೆಯಿದ್ದರೂ ಅಭೂತಪೂರ್ವ ಸಾಧನೆ ಮಾಡಿದ ವ್ಯಕ್ತಿ. ಇವರು ಶ್ರೀಕಾಂತ್ ಬೊಲ್ಲಾಂಟ್ ಇಂಡಸ್ಟ್ರೀಸ್ ಸ್ಥಾಪಕ. ಕೌಶಲ್ಯರಹಿತ ಮತ್ತು ವಿಕಲಚೇತನರಿಗೆ ಉದ್ಯೋಗವನ್ನು ನೀಡಿದರು. ಈ ಚಿತ್ರದಲ್ಲಿ ರಾಜ್ ಕುಮಾರ್ ಜೊತೆಗೆ ಜ್ಯೋತಿಕಾ, ಶರದ್ ಕೇಲ್ಕರ್ ಮತ್ತು ಅಲಯಾ ಎಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ತುಷಾರ್ ಹಿರಾನಂದಾನಿ ನಿರ್ದೇಶಿಸಿದ್ದಾರೆ. ಜಗದೀಪ್ ಸಿಧು ಮತ್ತು ಸುಮಿತ್ ...