Bangalore, ಏಪ್ರಿಲ್ 30 -- ಬೆಂಗಳೂರು: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ತಾಂಡೇಲ್‌ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಚಂದೂ ಮೊಂಡೆಟಿ ಮುಂದಿನ ಚಿತ್ರ ರಿಲೀಸ್‌ಗೆ ಮುನ್ನವೇ ಒಟಿಟಿ ಡೀಲ್‌ ನಡೆದಿದೆ. ಈ ಸಿನಿಮಾದ ನಿರ್ಮಾಪಕರು ತಾಂಡೇಲ್‌ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ 40 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು ಚೈತನ್ಯ ಅವರ ಸಿನಿಮಾಗಳಲ್ಲಿಯೇ ಅತಿದೊಡ್ಡ ಒಪ್ಪಂದವಾಗಿದೆ.

ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ತಾಂಡೇಲ್‌ ಚಿತ್ರದ ತಯಾರಕರು ಹೀಗೆ ಬರೆದಿದ್ದಾರೆ. "ಚಿತ್ರದ ವ್ಯವಹಾರವು ಉತ್ತಮ ಆರಂಭ ಪಡೆದಿದೆ. ಪ್ರಮುಖ ಒಟಿಟಿ ಫ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಭಾರತ ಮತ್ತು ಹಿಂದಿ ಭಾಷೆಗಳಿಗೆ ತಾಂಡೇಲ್‌ ಡಿಜಿಟಲ್‌ ಹಕ್ಕುಗಳನ್ನು 40 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಪ್ರೇಮಂ ಮತ್ತು ಸವ್ಯಸಾಚಿ ನಂತರ ತಾಂಡೇಲ್‌ ಚಿತ್ರಕ್ಕಾಗಿ ನಾಗ ಚೈತನ್ಯ ಮತ್ತು ಚಂದೂ ಒಂದಾಗಿದ್ದಾರೆ. ಶೇಖರ್ ಕಮ್ಮುಲಾ ಅವರ ಲವ್ ಸ್ಟೋರಿ ನಂತರ ಸಾಯಿ ಅವರೊಂದಿಗೆ ಚೈತನ್ಯ ಅವರ ಎರಡನೇ ಚಿತ್ರ ಇದಾಗಿದೆ. ದ...