Shimoga, ಮೇ 2 -- ಶಿವಮೊಗ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಅವರ ಫಿಟ್ನೆಸ್‌ಗೆ ನಾನೂ ಮಾರು ಹೋಗಿದ್ದೇನೆ. ಅವರ ಫಿಟ್ನೆಸ್‌ ನೋಡಿದರೆ ನನಗೂ ನಿಜವಾಗಿಯೂ ಖುಷಿಯಾಗುತ್ತದೆ. ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ನಾನು ರಾಹುಲ್‌ ಗಾಂಧಿ ಅವರ ಅಭಿಮಾನಿ. ಇದು ಕನ್ನಡದ ನಟ, ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಕುರಿತು ಹೇಳಿದ ಅಭಿಮಾನದ ನುಡಿ. ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಗುರುವಾರ ನಡೆದ ಬೃಹತ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಿವರಾಜಕುಮಾರ್‌ ಅವರು ರಾಹುಲ್‌ ಗಾಂಧಿ ಕುರಿತು ಮೆಚ್ಚುಗೆ ಮಾತುಗಳನ್ನೇ ಆಡಿದರು. ಶಿವಣ್ಣ ಅವರ ಈ ಮಾತಿಗೆ ರಾಹುಲ್‌ ಗಾಂಧಿ ಅವರದ್ದೂ ನಗೆಯೇ ಉತ್ತರವಾಗಿತ್ತು. ಅಭಿಮಾನಿಗಳು ಕೂಡ ಶಿವಣ್ಣ ಮಾತಿಗೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು.

ರಾಹುಲ್‌ ಗಾಂಧಿ ಅವರ ದೈಹಿಕ ಸಾಮರ್ಥ್ಯ ನೋಡಿದರೆ ಖುಷಿ ಎನ್ನಿಸುತ್ತದೆ. ಏಕೆಂದರೆ ದೇಶದ ನಾಯಕರಾದವರು ಮೊದಲು ...