Bengaluru, ಮೇ 5 -- ಸತ್ಯನಾರಾಯಣ ಸ್ವಾಮಿ ಪೂಜೆ: ಹಿಂದೂ ಸಂಪ್ರದಾಯದಲ್ಲಿ ಅನೇಕ ಪೂಜೆ, ವ್ರತಾಚರಣೆಗಳಿವೆ. ಯಾರ ಜೀವನದಲ್ಲಿ ಏನೇ ಕಷ್ಟ ಎದುರಾದರೂ ಅದು ನಿವಾರಣೆ ಆಗಲು ದೇವರ ಅನುಗ್ರಹ ಬೇಕೇ ಬೇಕು. ಹಾಗೇ ಕೆಲವೊಂದು ಪೂಜೆಗಳನ್ನು ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುತ್ತದೆ. ಅವುಗಳಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಕೂಡಾ ಒಂದು. ಸಾಮಾನ್ಯವಾಗಿ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಸ್ವಾಮಿ ಪೂಜೆ ಆಚರಿಸಲಾಗುತ್ತದೆ.

ಮನೆ ಗೃಹಪ್ರವೇಶದ ಸಮಯದಲ್ಲಿ ಹಿಂದೂಗಳು ತಪ್ಪದೆ ಸತ್ಯನಾರಾಯಣ ಪೂಜೆ ಮಾಡುತ್ತಾರೆ. ಮದುವೆ ನಂತರ ನವದಂಪತಿಯನ್ನು ಕೂರಿಸಿ ಸತ್ಯನಾರಾಯಣ ಪೂಜೆ ಮಾಡಲಾಗುತ್ತದೆ. ಮಕ್ಕಳ ನಾಮಕರಣ ಸಮಾರಂಭದಲ್ಲಿ ಕೂಡಾ ಸತ್ಯನಾರಾಯಣ ವ್ರತ ಮಾಡಲಾಗುತ್ತದೆ. ಪೂಜೆಯನ್ನು ಯಾವುದೇ ತಿಂಗಳ ಶುಕ್ಲಪಕ್ಷದ ಶುಭ ಸಮಯದಲ್ಲಿ ಮಾಡಬಹುದು. ಆದರೆ ಏಕಾದಶಿ ತಿಥಿ ಹಾಗೂ ಹುಣ್ಣಿಮೆ, ಸತ್ಯನಾರಾಯಣ ಪೂಜೆ ಮಾಡಲು ಸೂಕ್ತ ಸಮಯ. ಪ್ರತಿ ಹುಣ್ಣಿಮೆಯಂದು ಬಹುತೇಕ ದೇವಸ್ಥಾನಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗುತ್ತದೆ.

ಇದನ್ನೂ ಓದಿ: ಪೂಜೆಗೆ ಬಾಳೆಎಲೆ...