New Delhi, ಏಪ್ರಿಲ್ 25 -- ಬೆಂಗಳೂರು: ರೆಕ್ಕೆ ಕಟ್ಟಿಕೊಂಡು ಆಕಾಶದಲ್ಲಿ ಹಾರಾಡುವುದು, ಹೊಸ ಲೋಕದಲ್ಲಿ ನಡೆದಾಡುವುದು, ಮೇಲೆಯಿಂದ ಕೆಳಗೆ ಬೀಳುವುದು ಹೀಗೆ ಹತ್ತಾರು ಬಗೆಯ ಕನಸುಗಳು ಬೀಳುತ್ತವೆ ಎಂದು ಸಾಕಷ್ಟು ಮಂದಿ ಹೇಳುವುದನ್ನು ನೋಡಿದ್ದೇವೆ. ನಿಜ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಜನರಿಗೆ ಇಂಥ ಪುನರಾವರ್ತಿತ ಕನಸುಗಳು (Recurring Dreams) ಬೀಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಕೆಲವು ವಿಷಯಗಳಲ್ಲಿ ಮನುಷ್ಯ ಸಕಾರಾತ್ಮಕವಾಗಿದ್ದರೂ, ಪುನರಾವರ್ತಿತ ದುಃಸ್ವಪ್ನಗಳು ಗೊಂದಲವನ್ನುಂಟುಮಾಡಬಹುದು. ಪುನರಾವರ್ತಿತ ಕನಸುಗಳು ನಿರ್ದಿಷ್ಟ ವಿಷಯಗಳು, ಜನರು ಮತ್ತು ಸಂದರ್ಭಗಳ ಸುತ್ತಲೂ ಸುತ್ತುತ್ತವೆ. ಇಂತಹ ಕನಸುಗಳಿಗೆ ಏನು ಕಾರಣ ಅಂತ ತಜ್ಞರು ವಿವರಿಸಿದ್ದಾರೆ.

ದೈನಂದಿನ ಜೀವನದಲ್ಲಿ ಒತ್ತಡ ಮತ್ತು ಆತಂಕವು ಕೆಲವೊಂದು ವಿಷಯಗಳಲ್ಲಿ ಕನಸುಗಳನ್ನು ಪ್ರಚೋದಿಸಬಹುದು. ಪಿಟಿಎಸ್‌ಡಿ (ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಹೊಂದಿರುವ ಜನರಿಗೆ ಪುನರಾವರ್ತಿತ ಕನಸುಗಳ ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತವ...