Bangalore, ಮೇ 1 -- ಚಿದಂಬರಂ ನಿರ್ದೇಶನದ ಮುಂಜುಮ್ಮೆಲ್‌ ಬಾಯ್ಸ್‌ ಎಂಬ ಬ್ಲಾಕ್‌ಬಸ್ಟರ್‌ ಸರ್ವೈವಲ್‌ ಥ್ರಿಲ್ಲರ್‌ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ ಮತ್ತು ಇತರರು ನಟಿಸಿರುವ ಈ ಸಿನಿಮಾ ಮೊದಲು ಮಲಯಾಳಂನಲ್ಲಿ ಮಾತ್ರ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ತೆಲುಗು ಡಬ್ಬಿಂಗ್‌ ಆವೃತ್ತಿಯು ಥಿಯೇಟರ್‌ನಲ್ಲಿ ರಿಲೀಸ್‌ ಆಗಿತ್ತು. ತೆಲುಗು ಭಾಷೆಯಲ್ಲೂ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಇದೀಗ ಮುಂಜುಮ್ಮೆಲ್‌ ಬಾಯ್ಸ್‌ ಸಿನಿಮಾವು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿದೆ. ಒಟಿಟಿಯಲ್ಲಿ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮುಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನೋಡಬಹುದಾಗಿದೆ.

ಮಂಜುಮ್ಮೆಲ್ ಬಾಯ್ಸ್ ಹಿಂದಿ ಮತ್ತು ಕನ್ನಡ ಆವೃತ್ತಿಗಳನ್ನು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಮಾಡಲು ನಿರ್ಧರಿಸಲಾಗಿದೆ. ಈ ಎರಡು ಭಾ...