ಭಾರತ, ಮೇ 9 -- Kundalini Meditation: ಆಧ್ಯಾತ್ಮದ ಪ್ರಕಾರ ದೇಹ, ಮನಸ್ಸು ಮತ್ತು ಆತ್ಮ ಇವೆಲ್ಲವುಗಳಿಗೆ ಒಂದಕ್ಕೊಂದು ಸಂಬಂಧವಿದೆ. ಅವುಗಳ ಶುದ್ಧಿ ಮತ್ತು ಧನಾತ್ಮಕ ಶಕ್ತಿ ಗಳಿಸಲು ಯೋಗ, ಧ್ಯಾನಗಳು ಸಹಾಯ ಮಾಡುತ್ತವೆ. ಕುಂಡಲಿನಿ ಧ್ಯಾನ ಎನ್ನುವುದು ಬಹಳ ಪುರಾತನ ಅಭ್ಯಾಸಗಳಲ್ಲಿ ಒಂದಾಗಿದೆ. ಇದು ಮನಸ್ಸನ್ನು ಶಾಂತಗೊಳಿಸುವ ಅಥವಾ ಕೇಂದ್ರೀಕರಿಸುವ ವಿಧಾನವಾಗಿದೆ. ಈ ಕ್ರಿಯಾತ್ಮಕ ಪ್ರಕ್ರಿಯೆಯು ಬೆನ್ನುಮೂಳೆಯ ಕೆಳಭಾಗದಲ್ಲಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ಶಕ್ತಿಯು ಸಾಮಾನ್ಯವಾಗಿ ಮಲಗಿರುವ ಸರ್ಪದಂತೆ ಕಾಣಿಸುತ್ತದೆ. ಆ ಸುಪ್ತ ಶಕ್ತಿಯನ್ನು ಏಳು ಚಕ್ರಗಳ ಮೂಲಕ ಜಾಗೃತಗೊಳಿಸಿ ಆಧ್ಯಾತ್ಮದ ಸಾಕ್ಷಾತ್ಕಾರಗೊಳಿಸುವುದೇ ಈ ಧ್ಯಾನ. ಪ್ರತಿಯೊಬ್ಬ ವ್ಯಕ್ತಿಯೊಳಗೆ ಸುಪ್ತ ಶಕ್ತಿ ಅಡಗಿದೆ ಎಂದು ಕುಂಡಲಿನಿ ಚಕ್ರ ಧ್ಯಾನವು ಹೇಳುತ್ತದೆ. ಇದನ್ನು ಉಸಿರಾಟ, ಮುದ್ರೆ, ಮಂತ್ರ ಮತ್ತು ದೈಹಿಕ ವ್ಯಾಯಾಮಗಳ ಮೂಲಕ ಆ ಶಕ್ತಿಯ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದು ದೇಹ, ಮನಸ್ಸು ಮತ್ತು ಆತ್ಮಗಳನ್ನು ಬೆಸೆಯುತ...