ಭಾರತ, ಏಪ್ರಿಲ್ 23 -- ಡಿಜಿಟಲ್‌ ಯುಗದಲ್ಲಿ ಸಂಪರ್ಕ ಎನ್ನುವುದು ಅತ್ಯಂತ ಮುಖ್ಯ. ಸಂಪರ್ಕವಿಲ್ಲದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಹಾಗಾಗಿಯೇ ತಂತ್ರಜ್ಞಾನ ದೈತ್ಯ ಕಂಪನಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇವೆ. ಇತ್ತೀಚಿನ ಹೊಸ ಬೆಳವಣಿಗೆಗಳಲ್ಲಿ ಸಂಪರ್ಕಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. 2ಜಿ, 3ಜಿ, 4ಜಿ, 5ಜಿ ಗಳನ್ನು ಬಳಕೆ ಮಾಡಿದ್ದೇವೆ, ಈಗೇನಿದ್ದರೂ ಸ್ಯಾಟಲೈಟ್‌ಗಳ ಕಾಲ. ಇತ್ತೀಚಿನ ಮೊಬೈಲ್‌ಗಳು ಸ್ಯಾಟಲೈಟ್‌ ಕನೆಕ್ಟಿವಿಟಿ (ಉಪಗ್ರಹದ ಮೂಲಕ ಸಂಪರ್ಕ) ಯನ್ನು ಬೆಂಬಲಿಸುತ್ತವೆ. ಇತ್ತಿಚಿನ ಬೆಳವಣಿಗೆಯೆಂದರೆ ಗೂಗಲ್‌ (Google)ಉಪಗ್ರಹದ ಮೂಲಕ ಸಂಪರ್ಕ ಹೊಂದಿರುವ ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ (Google Map)ನಲ್ಲಿ ಸ್ಥಳವನ್ನು ನವೀಕರಿಸಬಹುದಾದ ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಜನಪ್ರಿಯ ತಂತ್ರಜ್ಞಾನ ಮಾಹಿತಿದಾರರಾದ ಅಸೆಂಬಲ್‌ಡಿಬಗ್‌ ಇದನ್ನು ಬಹಿರಂಗಪಡಿಸಿದೆ. ಗೂಗಲ್ ಮ್ಯಾಪ್‌ ಬೀಟಾ v11.125 ಆವೃತ್ತಿಯು ಸ್ಯಾಟಲೈಟ್‌ ಮೂಲಕ ಸಂಪರ್ಕ ಸಾಧಿಸುವ ಬಳಕೆದಾರರಿಗೆ ತಮ್ಮ ಸ್ಥಳ...