ಭಾರತ, ಮಾರ್ಚ್ 4 -- ನಿಮ್ಮನೆಲಿ ಚಪಾತಿ, ರೊಟ್ಟಿ ಮತ್ತು ಪೂರಿಯನ್ನು ಹೆಚ್ಚಾಗಿ ಮಾಡ್ತೀರಾ? ಅದಕ್ಕೆ ನೆಂಚಿಕೊಳ್ಳಲು ಚಟ್ನಿ, ಸಾಗು ಅಥವಾ ತರಕಾರಿಗಳ ಪಲ್ಯ ಮಾಡ್ತಾರಾ? ಇವುಗಳ ಕಾಂಬಿನೇಷನ್​ ತಿಂದು ಬೋರ್​ ಆಗಿದ್ರೆ ನೀವೊಮ್ಮೆ ಕ್ಯಾಪ್ಸಿಕಂ ಗ್ರೇವಿ ಟ್ರೈ ಮಾಡಿ. ದೊಣ್ಣೆ ಮೆಣಸಿನಕಾಯಿ ಖಾರ ಕಡಿಮೆ ಇರುತ್ತೆ, ಆದ್ರೆ ಇದನ್ನ ಅಡುಗೆಗೆ ಬಳಸಿದ್ರೆ ರುಚಿ ಜಾಸ್ತಿ ಇರುತ್ತೆ. ನಿಮ್ಮನೆಲಿ ಚಪಾತಿ, ರೊಟ್ಟಿ ಅಥವಾ ಪೂರಿಯನ್ನು ಮಾಡಿದಾಗ ಕ್ಯಾಪ್ಸಿಕಂ ಗ್ರೇವಿ ಮಾಡಿ ಅದರ ಜೊತೆ ಸವಿಯಿರಿ. ಆಹಾ! ಎಂಥಾ ರುಚಿ ಅಂತ ಚಪ್ಪರಿಸಿಕೊಂಡು ತಿಂತೀರ. ನಾವಿಲ್ಲಿ ನಿಮಗೆ ಕ್ಯಾಪ್ಸಿಕಂ ಗ್ರೇವಿ ಮಾಡುವ ವಿಧಾನವನ್ನು ಹೇಳಿಕೊಡ್ತೀವಿ.

ದೊಣ್ಣೆ ಮೆಣಸಿನಕಾಯಿ

ಅಡುಗೆ ಎಣ್ಣೆ

ಕಸ್ತೂರಿ ಮೇತಿ

ಸೋಂಪಿನ ಕಾಳು

ಈರುಳ್ಳಿ

ಶುಂಠಿ

ಬೆಳ್ಳುಳ್ಳಿ

ಉಪ್ಪು

ಖಾರದ ಪುಡಿ

ದನಿಯಾ ಪುಡಿ

ಗರಂ ಮಸಾಲಾ

ಅರಿಶಿನ ಪುಡಿ

ಟೊಮೆಟೊ ಹಣ್ಣು

ಒಂದು ಪಾತ್ರೆಯನ್ನು ಗ್ಯಾಸ್​ ಮೇಲೆ ಇಟ್ಟು ಅದಕ್ಕೆ 4 ಟೇಬಲ್​ ಸ್ಪೂನ್​ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್...