ಭಾರತ, ಏಪ್ರಿಲ್ 30 -- ಗಣಿತದ ಪಜಲ್‌ಗಳನ್ನು ಬಿಡಿಸೋಕೆ ಕೂತ್ರೆ ಸಮಯ ಸರಿದಿದ್ದೆ ತಿಳಿಯೊಲ್ಲ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಬ್ರೈನ್‌ ಟೀಸರ್‌ಗಳ ಮೂಲಕ ನೆಟ್ಟಿಗರನ್ನು ಸೆಳೆಯಲಾಗುತ್ತಿದೆ. ಗಣಿತ ಪ್ರಿಯರು ಈ ಬ್ರೈನ್‌ ಟೀಸರ್‌ಗಳ ಹುಡುಕಾಟ ನಡೆಸಬಹುದು. ಇಲ್ಲಿರುವ ಪಜಲ್‌ಗಳು ಮೇಲ್ನೋಟಕ್ಕೆ ನಿಮಗೆ ಸುಲಭ ಅನ್ನಿಸಿದ್ರೂ ಉತ್ತರ ಹುಡುಕೋಕೆ ಹೊರಟಾಗ ತಲೆ ಕೆಡುವುದು ಖಂಡಿತ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ಹಾಗೇ ಇದೆ. ಇದರಲ್ಲಿ ಕೂಡಿಸುವ ಸುಲಭ ಲೆಕ್ಕಾಚಾರವಿದೆ. ಇದಕ್ಕೆ ಉತ್ತರ ಹೇಳೋದು ಖಂಡಿತ ಸುಲಭವಲ್ಲ. @EdieBxgood ಎಂಬ ಎಕ್ಸ್‌ ಬಳಕೆದಾರರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಮೊದಲು ಎಸ್‌ ಅಥವಾ ನೋ ಹೇಳಿ ನಾನು ಆಮೇಲೆ ಉತ್ತರ ತಿಳಿಸುತ್ತೇನೆ ಎಂದು ಶೀರ್ಷಿಕೆ ಬರೆದು ಇದನ್ನು ಪೋಸ್ಟ್‌ ಮಾಡಲಾಗಿದೆ. ಚಿತ್ರದ ಮೇಲೆ 5 ಸೆಕೆಂಡ್‌ನಲ್ಲಿ ಈ ಗಣಿತದ ಪಜಲ್‌ ಅನ್ನು ಬಿಡಿಸಲು ಸಾಧ್ಯವೇ ಎಂದು ಬರೆಯಲಾಗಿದೆ.

ಏಪ್ರಿಲ್‌ 23 ರಂದು ಪೋಸ್ಟ್‌ ಮಾಡಲಾದ ಈ ಬ್ರೈನ್‌...