Bengaluru, ಮೇ 2 -- ಬೆಂಗಳೂರು: ಬಹಳ ಅಪರೂಪಕ್ಕೆ ಗುಡುಗು ಸಿಡಿಲಿನ ಅಬ್ಬರ ಬೆಂಗಳೂರಿನ ಜನರ ಕಿವಿಗೆ ಬಿದ್ದಿದೆ. 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ ಮಳೆಯಾಗಿಲ್ಲ. ಇದರ ಜೊತೆಗೆ ಬಿಸಿ ಗಾಳಿ ಜನರನ್ನು ಮತ್ತಷ್ಟು ಕಂಗೆಡಿಸಿತ್ತು. ಇಡೀ ವಾರ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇತ್ತು. ಹಗಲು ಮಾತ್ರವಲ್ಲ, ರಾತ್ರಿ ವೇಳೆಯೂ ತಾಪಮಾನ ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ ಹೆಚ್ಚೇ ಇದೆ. ಉದ್ಯಾನ ನಗರಿಯಲ್ಲಿ ಸಂಜೆ 6 ಗಂಟೆಗೆ ಅಲ್ಲಲ್ಲಿ ಮಳೆ ಆರಂಭವಾಯಿತು. ನಗರದ ಉತ್ತರ ಮತ್ತು ಕೇಂದ್ರ ಭಾಗದ ಪ್ರದೇಶಗಳಲ್ಲಿ ಮಳೆಯಾಗಿದೆ.

ಕಾದು ಕೆಂಡದಂತಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲೆ ಕೊನೆಗೂ ವರುಣ ಕೃಪೆ ತೋರಿದ್ದಾನೆ. ಮೆಜೆಸ್ಟಿಕ್, ವೈಟ್ ಫೀಲ್ಡ್, ಕಲ್ಯಾಣ ನಗರ, ರಾಜರಾಜೇಶ್ವರಿ ನಗರ, ವಸಂತಪುರ, ಕುಮಾರಸ್ವಾಮಿ ಲೇಔಟ್, ಶ್ರೀನಗರ, ಗಿರಿನಗರ, ವಿಜಯನಗರ, ಟಿನ್ ಫ್ಯಾಕ್ಟರಿ, ಕೆ.ಆರ್‌ಪುರಂ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗಿದೆ.

ದಿಢೀರ್ ಮಳೆಯಿಂದ ದ್ವಿಚಕ್ರ ವಾಹನ ಸವಾ...