Bangalore, ಏಪ್ರಿಲ್ 19 -- ಬಹುತೇಕ ನಟಿಯರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಮನೆಯ ಒಬ್ಬರು ಸದಸ್ಯರಂತೆ ನಾಯಿಯನ್ನು ನೋಡಿಕೊಳ್ಳುತ್ತಾರೆ. ಕೆಲವು ನಟಿಯರು ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿಯನ್ನಿಟ್ಟುಕೊಂಡಿದ್ದಾರೆ. ಬೀದಿನಾಯಿಗಳ ರಕ್ಷಣೆ, ಗಾಯಗೊಂಡ ಪ್ರಾಣಿಗಳ ಕುರಿತು ಕಾಳಜಿ ಇತ್ಯಾದಿಗಳಲ್ಲಿ ತೊಡಗಿದ್ದಾರೆ. ಬಾಲಿವುಡ್‌ ನಟಿ ಆಲಿಯಾ ಭಟ್‌ಗೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಗೂಳಿಯೊಂದು ಬೀದಿನಾಯಿಗಳ ಮೇಲೆ ದಾಳಿ ಮಾಡುತ್ತಿದ್ದಾಗ ಬಾಲಕನೊಬ್ಬ ಆ ನಾಯಿಗಳನ್ನು ರಕ್ಷಣೆ ಮಾಡುವ ವಿಡಿಯೋವನ್ನು ನಟಿ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದರು. ಇದೀಗ ಆಲಿಯಾ ಭಟ್‌ ಕೂಡ ಪ್ರಾಣಿಗಳ ಕುರಿತು ಪ್ರೀತಿ ವ್ಯಕ್ತಪಡಿಸಿ ವಿಡಿಯೋವೊಂದನ್ನು ಮರುಪೋಸ್ಟ್‌ ಮಾಡಿದ್ದಾರೆ. ನಾಯಿಯೊಂದಕ್ಕೆ ಕೆಲಸದಾಕೆ ಹೊಡೆಯುತ್ತಿದ್ದ ವಿಡಿಯೋಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಫಿ ಚೌಧರಿ ಎಂಬ ಗಾಯಕಿಯು ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಮುಂಬೈ ಫೂಟ್‌ಫಾತ್‌ನಲ್ಲಿ ಮಹಿಳೆಯೊಬ್ಬಳು ನಾಯಿಯೊಂದಕ್ಕೆ ಹೊಡೆಯುವ ವಿಡಿಯೋವನ್ನು ಹಂಚಿಕೊಂಡಿ...