ಭಾರತ, ಏಪ್ರಿಲ್ 29 -- ಹೆಣ್ಣುಮಕ್ಕಳಿಗೆ ಲೈಂಗಿಕ ಶಿಕ್ಷಣ: ಸತ್ಯಕ್ಕೆ ಹಲವಾರು ಮುಖಗಳಿರುತ್ತವೆ. ನಮ್ಮ ರಾಷ್ಟ್ರ ಲಾಂಛನದ ಸಿಂಹಗಳಂತೆ. ಕೆಲವರಿಗೆ ಒಂದು ಮುಖ ಕಂಡರೆ, ಇನ್ನು ಕೆಲವರಿಗೆ ಎರಡು ಕಾಣುತ್ತದೆ. ಮತ್ತೆ ಕೆಲವರಿಗೆ ಮೂರು ಕಂಡರೆ, ಅಪರೂಪದಲ್ಲಿ ಅಪರೂಪಕ್ಕೆ ಬಹಳ ಕಡಿಮೆ ಜನರಿಗೆ ನಾಲ್ಕೂ ಸಿಂಹಗಳೂ ಕಾಣುತ್ತವೆ. ಆದರೆ ನಾವೂ ಕಂಡದ್ದನ್ನಷ್ಟೇ ಸತ್ಯ ಎಂದು ನಂಬುವ ಮತ್ತು ವಾದಿಸುವ ನಾವುಗಳು ಪೂರ್ಣದೃಷ್ಟಿಯಿಂದ ವಂಚಿತರಾಗುತ್ತೇವೆ. ಸಂತೆಯಲ್ಲಿ ಆನೆಯನ್ನು ನೋಡಲು ಹೊರಟ ಕುರುಡರ ಗುಂಪಿನ ಹಾಗೆ. ಕಳೆದ ಎರಡು ದಿನಗಳಿಂದ ಫೇಸ್‌ಬುಕ್ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಒಂದು ಲೇಖನ 'ಹೆಣ್ಣು ಮತ್ತು ಹಸ್ತಮೈಥುನ'. ಇದು ಬಹಳಷ್ಟು ಜನರಿಗೆ ಹೊಸ ವಿಷಯವಾಗಿದೆ.

ಲೇಖಕರು ಲೇಖನದ ಮೊದಲ ಸಾಲಿನಲ್ಲಿಯೇ 'ಈ ಲೇಖನ ಮಡಿವಂತರಿಗಲ್ಲ' ಎನ್ನುವ ವಿಶೇಷ ಸೂಚನೆಯೊಂದಿಗೆ ಈ ಲೇಖನದ ಮೂಲಕ ಜನಸಾಮಾನ್ಯರೊಳಗೆ ಒಂದು 'ವಿಚಾರ ಕ್ರಾಂತಿ' ನಡೆಯುವ ಸುಳಿವನ್ನು ನೀಡಿರುತ್ತಾರೆ. ಅವರ ಆಶಯದಂತೆಯೇ ಆಗುತ್ತಿದೆ ಕೂಡಾ. ಮಡಿವಂತ ಸಮಾಜವೇ ಹೆಚ್ಚುಹ...