ಭಾರತ, ಫೆಬ್ರವರಿ 18 -- ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಿದ್ದ ನೈಜೀರಿಯಾ ದೇಶದ ಪ್ರಜೆ ಇಫೆಂನಲ್ ಒಕೆಹುಕ್ವು ಮೈಕ್‌ಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬೆಂಗಳೂರು ನಗರದ 56ನೇ ಸಿಸಿಎಚ್‌ ನ್ಯಾಯಾಲಯ ಆದೇಶ ಹೊರಡಿಸಿದೆ. 2022ರಲ್ಲಿ ಕೊಡಿಗೇಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ವಿಚಾರಣೆ ನಡೆಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಕೆ. ರಂಜಿತ್ ವಾದಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ, ಮೆಟ್ರೋ​ ಇದ್ದರೂ ವಾಹನಗಳ ನೋಂದಣಿ ಹೆಚ್ಚಳ; 23 ಲಕ್ಷದ ದಾಟಿದ ಕಾರುಗಳ ಸಂಖ್ಯೆ

ಇಫೆಂನಲ್‌, 2022ರ ಜೂನ್ 10ರಂದು ಕೊಡಿಗೇಹಳ್ಳಿ ಗೇಟ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಈತನನ್ನು ತಡೆದು ಪೂರ್ವಾಪರ ವಿಚಾರಿಸಿದ್ದರು. ಆದರೆ, ಈತ ಯಾವುದೇ ದಾಖಲೆ ತೋರಿಸಿರಲಿಲ್ಲ. ಅಕ್ರಮ ವಾಸ ಆರೋಪದಡಿ ಇಫೆಂನಲ್‌ನನ್ನು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಇನ್​​ಸ್ಪೆಕ್ಟ...