ಭಾರತ, ಏಪ್ರಿಲ್ 30 -- ಬೆಂಗಳೂರು: ಕಮಲ್ ಹಾಸನ್ ಮತ್ತು ಅವರ ಮಗಳು ಶ್ರುತಿ ಹಾಸನ್ ಇತ್ತೀಚೆಗೆ ಮೊದಲ ಬಾರಿಗೆ ಇನಿಮೆಲ್‌ ಎಂಬ ಮ್ಯೂಸಿಕ್‌ ಆಡಿಯೋ ಕಾರ್ಯಕ್ರಮದಲ್ಲಿ ಮುಖಾಮುಖಿಯಾದರು. ತಂದೆ-ಮಗಳು ಜೋಡಿ ಲೆಗಸಿ ಆಫ್ ಲವ್ ಎಂಬ ಶೀರ್ಷಿಕೆಯ ವೀಡಿಯೊವನ್ನು ರಿಲೀಸ್‌ ಮಾಡಿದ್ದರು. ಈ ಸಮಯದಲ್ಲಿ ಪ್ರೀತಿ, ಸಂಬಂಧ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿದರು. ಇದೇ ಸಮಯದಲ್ಲಿ ಕಮಲ್‌ ಹಾಸನ್‌ ಭೌತಿಕ ಆಸೆಗಳ ಕುರಿತು ತನ್ನ ಆಲೋಚನೆಗಳನ್ನು ತಿಳಿಸಿದರು. ಈ ಸಮಯದಲ್ಲಿ ಕಮಲ್‌ ಹಾಸನ್‌ ಅವರು ಶಾರೂಖ್‌ ಖಾನ್‌ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಶ್ರುತಿ ಹಾಸನ್‌ ಅವರು ಈ ಸಂದರ್ಶನದಲ್ಲಿ ಕಮಲ್‌ ಹಾಸನ್‌ ಅವರ "ಈಡೇರದ ಆಸೆಯ" ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕಮಲ್‌ ಹಾಸನ್‌ ಹೀಗೆ ಹೇಳಿದ್ದಾರೆ. "ಈಡೇರದ ಆಸೆಗಳು ತುಂಬಾ ಇವೆ. ಅವೆಲ್ಲವನ್ನೂ ಪಟ್ಟಿ ಮಾಡುವ ಉದ್ದೇಶವಿಲ್ಲ. ಈ ರೀತಿ ಪಟ್ಟಿ ಮಾಡಿದರೆ ನನಗೆ ಅದು ಬೇಕು, ಇದು ಬೇಕು ಎಂಬ ತುಡಿತ ಉಂಟಾಗುತ್ತದೆ. ಈ ಸಮಯದಲ್ಲಿ ನನಗೆ ನನ್ನ ಹಳೆ ಕುಟುಂಬದ ಮನೆ ನೆನಪಾಗುತ್ತದೆ. ಎಲ್ಡಾಮ್ಸ...