Bengaluru,ಬೆಂಗಳೂರು, ಫೆಬ್ರವರಿ 9 -- ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯವನ್ನು ಸಂಪರ್ಕಿಸುವ ಬೆಂಗಳೂರು ಉಪನಗರ ರೈಲು ಯೋಜನೆಯನ್ನು 2027ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಕರ್ನಾಟಕದ ಮೂಲಸೌಕರ್ಯ ಸಚಿವ ಎಂ. ಬಿ. ಪಾಟೀಲ್‌ ಹೇಳಿದರು.

ಅವರು ಮೆಟ್ರೋ ಸೇವೆಗಳಿಗೆ ಸಮನಾಗಿ ರೈಲುಗಳ ನಿಯತ ಸಂಚಾರದೊಂದಿಗೆ ಉಪನಗರ ರೈಲುಗಳು ಇರುತ್ತವೆ. ಈ ಯೋಜನೆಗೆ ಸಂಬಂಧಿಸಿದ ಕೆಲಸವನ್ನು ವಿಳಂಬ ಮಾಡದಂತೆ ಕೆ-ರೈಡ್ ಗೆ ನಿರ್ದೇಶಿಸಲಾಗಿದೆ ಮತ್ತು ನಾವು ಅದನ್ನು ಸಮಯಕ್ಕೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಒತ್ತಿ ಹೇಳಿದರು.

ಇದನ್ನೂ ಓದಿ| ಉಪನಗರ ರೈಲು ಯೋಜನೆಗೆ ಗ್ರಹಣ; ಕಾರಿಡಾರ್‌-4 ಹಸ್ತಾಂತರವಾಗದ ಜಮೀನು, ಆರಂಭವಾಗದ ಕಾಮಗಾರಿ

ಈ ಯೋಜನೆಗೆ ಧನಸಹಾಯ ನೀಡಲು ಕರ್ನಾಟಕ ಸರ್ಕಾರವು ಜರ್ಮನಿಯ ಕೆಎಫ್ ಡಬ್ಲ್ಯೂ ಅಭಿವೃದ್ಧಿ ಬ್ಯಾಂಕ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬ್ಯಾಂಕ್ 20 ವರ್ಷಗಳವರೆಗೆ ಶೇಕಡಾ 4 ರಷ್ಟು ವಾರ್ಷಿಕ ಬಡ್ಡಿದರದಲ್ಲಿ 4,561 ಕೋಟಿ ರೂ.ಗಳನ್ನು ಸಾಲ ನೀಡಲಿದೆ. ಇದು ಜರ್ಮನಿಯ ಕೆಎಫ್ಡಬ...