ಭಾರತ, ಫೆಬ್ರವರಿ 29 -- ಪ್ರಮುಖ ಕಾರು ತಯಾರಿಕಾ ಕಂಪನಿ ಹುಂಡೈ ತನ್ನ ಹೊಸ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿ ಮಾಡಿದೆ. ಆದರೆ ಬಿಡುಗಡೆಗೂ ಮುನ್ನವೇ ಈ ಎಸ್‌ಯುವಿಯ ಅಧಿಕೃತ ಬುಕಿಂಗ್ ಆರಂಭವಾಗಿದೆ. ಈ ಹೊಸ ಕಾರಿನ ಹೆಸರು ಹುಂಡೈ ಕ್ರೆಟಾ ಎನ್ ಲೈನ್ (Hyundai Creta N Line) ಅಂತ. ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ಹುಂಡೈ ಕ್ರೆಟಾ ಎನ್ ಲೈನ್ ಕಾರಿಗೆ ಆಯ್ದ ಹುಂಡೈ ಡೀಲರ್‌ಶಿಪ್‌ಗಳಲ್ಲಿ ಮುಂಚಿತವಾಗಿ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಆಸಕ್ತರು ಬುಕ್ ಮಾಡಿಕೊಳ್ಳಬಹುದು ಎಂದು ಹುಂಡೈ ಕಂಪನಿ ಹೇಳಿದೆ. ಅಧಿಕೃತ ಪೋರ್ಟಲ್‌ನಲ್ಲಿ ಇನ್ನೂ ಬುಕಿಂಗ್ ಆರಂಭವಾಗಿಲ್ಲ. ಆಯ್ದ ಡೀಲರ್‌ಶಿಪ್‌ಗಳಿಗೆ ಮಾತ್ರ ಅವಕಾಶ ನೀಡಿದೆ.

ಆಸಕ್ತ ಗ್ರಾಹಕರು ಕ್ರೆಟಾ ಎನ್‌ ಲೈನ್‌ಗಾಗಿ 25,000 ರೂಪಾಯಿ ಟೋಕನ್ ಹಣವನ್ನು ಪಾವತಿಸಿ ಬುಕಿಂಗ್ ಮಾಡಿಕೊಳ್ಳಬಹುದು. ಒಂದು ವೇಳೆ ಬುಕಿಂಗ್ ರದ್ದು ಮಾಡಿಕೊಂಡರೆ ಅವರ ಟೋಕನ್ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಹುಂಡೈ ಕಂಪನಿ ಮಾಹಿತಿ ನೀಡಿದೆ. ಎನ್‌ ಲೈನ್...