Bengaluru,ಬೆಂಗಳೂರು, ಮೇ 9 -- ಬೆಂಗಳೂರು: ಸುಡುಬಿಸಿಲಿನ ಸಂಕಷ್ಟದ ಬಳಿಕ ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದ್ದು, ಒಂದೆಡೆ ಮೂಲಸೌಕರ್ಯದ ಕೊರತೆಯ ಕಾರಣ ನಗರವಾಸಿಗಳು ತೊಂದರೆ ಅನುಭವಿಸತೊಡಗಿದ್ದಾರೆ. ಇನ್ನೊಂದೆಡೆ, ನಿನ್ನೆ (ಮೇ 8 ) ಮಳೆ ಸುರಿದ ಸಂದರ್ಭದಲ್ಲಿ ಪಾಟರಿ ಟೌನ್ ಬೋರ್ ಬ್ಯಾಂಕ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಮಣ್ಣು ಕುಸಿದು ದೊಡ್ಡ ಕಂದಕ ಉಂಟಾಗಿತ್ತು. ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು.

ಈ ರೀತಿ ಭೂಮಿ ಕುಸಿದು ದೊಡ್ಡ ಗುಂಡಿ ಉಂಟಾದಾಗ ಸ್ಥಳದಲ್ಲಿ ಮೆಟ್ರೋ ಕಾರ್ಮಿಕರು ಯಾರೂ ಇರಲಿಲ್ಲ. ವಾಹನ ಸಂಚಾರವೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಮನುಷ್ಯರಿಗೆ ಹಾನಿ ಸಂಭವಿಸಿಲ್ಲ. ಆದಾಗ್ಯೂ, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಪ್ರಯಾಣಿಕರು ಪರದಾಡಿದರು. ಈ ದುರಂತ ಸಂಭವಿಸಿದ ಕೆಲ ಹೊತ್ತಿನಲ್ಲೇ ಪುಲಕೇಶಿನಗರ ಸಂಚಾರ ಪೊಲೀಸರು, ಸಂಚಾರ ಸಲಹೆ ನೀಡಿದ್ದರು.

ಬೆಂಗಳೂರಿನ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟರಿ ಟೌನ್ ಬೋರ್ ಬ್ಯ...