Bangalore, ಮಾರ್ಚ್ 1 -- ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಪಟಾಕಿ ದುರಂತಗಳು ನಡೆಯುತ್ತಲೇ ಇವೆ. ಕೆಲ ತಿಂಗಳ ಅಂತರದಲ್ಲೇ ನಾಲ್ಕೈದು ಪ್ರಕರಣ ವರದಿಯಾಗಿವೆ. ಕಳೆದ ವರ್ಷ ಆನೇಕಲ್‌ ನಲ್ಲಿ ನಡೆದ ಪಟಾಕಿ ದುರಂತದಲ್ಲಿ ಹಲವರು ಮೃತಪಟ್ಟು ಭಾರೀ ಅನಾಹುತವೇ ಸಂಭವಿಸಿತ್ತು. ಕೋಟ್ಯಂತರ ರೂ. ನಷ್ಟ ಕೂಡ ಆಗಿತ್ತು. ಆಗ ಕರ್ನಾಟಕ ಸರ್ಕಾರ ಹಲವರ ವಿರುದ್ದ ಕ್ರಮ ಕೈಗೊಂಡಿತ್ತು. ಈ ಬಾರಿ ದೀಪಾವಳಿಗೆ ಇನ್ನೂ ಸಾಕಷ್ಟು ಸಮಯವಿದೆ. ಅಲ್ಲದೇ ಗಣೇಶನ ಹಬ್ಬಕ್ಕೂ ಕಾಲಾಕಾಶವಿದೆ. ಆದರೆ ಕರ್ನಾಟಕ ಪರಿಸರ ಇಲಾಖೆ ಮಾತ್ರ ಈಗಿನಿಂದಲೇ ಪಟಾಕಿ ಮಾರಾಟ ಮಾಡುವವರು, ಉತ್ಪಾದಕರು, ಗಣೇಶ ಮೂರ್ತಿ ತಯಾರಿಸುವವರನ್ನು ಎಚ್ಚರಿಸುವ ಕೆಲಸ ಶುರು ಮಾಡಿದ್ದಾರೆ.

ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಬಾರಿ 7 ತಿಂಗಳ ಮೊದಲೇ ಕಾರ್ಯೋನ್ಮುಖರಾಗಿದ್ದು, ಪಿಓಪಿ ಮೂರ್ತಿಗಳ ತಯಾರಕರು ಮತ್ತು ಪಟಾಕಿ ಮಾರಾಟಗಾರರಿಗೆ ಸ್ಪಷ್ಟ ಸೂಚನೆಯೊಂದಿಗೆ ನೋಟಿಸ್ ನೀಡಲು ಆದೇಶ ನೀಡಿದ್ದ...