ಭಾರತ, ಮೇ 1 -- ಬೆಂಗಳೂರು: ಗಿಚ್ಚಿ ಗಿಲಿಗಿಲಿಯನ್ನು ನಗುವಿನ ಕಚಗುಳಿ ಇಡುವ ತುಕಾಲಿ ಸಂತೊಷ್‌ ಹುಲಿ ವೇಷ ಧರಿಸಿದ್ದಾರೆ. ಮೊದಲ ನೋಟಕ್ಕೆ ಹುಲಿ ವೇಷಧಾರಿಯನ್ನು ನೋಡಿದರೆ ಇವರು ತುಕಾಲಿ ಸಂತೋಷ್‌ ಎಂದು ಗುರುಸಿಸುವುದು ಕಷ್ಟ. ಈ ವೀಕೆಂಡ್‌ನಲ್ಲಿ ಹುಲಿ ವೇಷವನ್ನು ಒಳಗೊಂಡ ಸ್ಕಿಟ್‌ ಇರುವ ಸೂಚನೆಯಿದೆ. ಹಾಸ್ಯಗಾರರು ಮತ್ತು ಹಾಸ್ಯಗಾರರಲ್ಲದವರು ಜೋಡಿಯಾಗಿ ವೀಕ್ಷಕರನ್ನು ರಂಜಿಸುವ ವಿನೂತನ ಆಲೋಚನೆಯ ಟಿವಿ ಶೋ ಗಿಚ್ಚಿ ಗಿಲಿಗಿಲಿ ಈ ವರ್ಷ ಫೆಬ್ರವರಿ ತಿಂಗಳಲ್ಲಿ ಆರಂಭವಾಗಿತ್ತು. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ತುಕಾಲಿ ಸಂತೋಷ್‌ ಮತ್ತು ಅವರ ಪತ್ನಿ ಮಾನಸ ಈ ಶೋನಲ್ಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಸದ್ಯ ತುಕಾಲಿ ಸಂತೋಷ್‌ ಹುಲಿ ವೇಷದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲಿ ಗಿಚ್ಚಿಗಿಲಿಗಿಲಿ ಹೊಸ ಎಪಿಸೋಡ್‌ ಪ್ರಸಾರವಾಗಲಿದೆ. ಎಲ್ಲರೂ ಮಿಸ್‌ ಮಾಡದೆ ನೋಡಿ ಎಂದು ತುಕಾಲಿ ಸಂತೋಷ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು...