Bengaluru, ಮೇ 5 -- ಗಂಗಾ ಸಪ್ತಮಿ 2024: ವೈಶಾಖ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ವಿಷ್ಣುವನ್ನು ಆರಾಧಿಸಲಾಗುತ್ತದೆ. ದಾನ, ಧರ್ಮ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ. ಹಾಗೇ ವೈಶಾಖ ಮಾಸದ ಶುಕ್ಲಪಕ್ಷದ 7ನೇ ದಿನದಂದು ಗಂಗಾ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 14, ಮಂಗಳವಾರ ಆಚರಿಸಲಾಗುತ್ತಿದೆ. ಗಂಗಾ ಸಪ್ತಮಿ ಆಚರಿಸುವುದು ಏಕೆ? ಶುಭ ಮುಹೂರ್ತ ಯಾವುದು ನೋಡೋಣ.

ವೈಶಾಖ ಮಾಸದ ಶುಕ್ಲ ಪಕ್ಷದ 7ನೇ ದಿನದಂದು ಗಂಗಾಯು ಭೂಮಿಗೆ ಇಳಿದಳು ಎಂದು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಭಗೀರಥ ರಾಜನ ಪೂರ್ವಜರಿಗೆ ಮೋಕ್ಷವನ್ನು ಒದಗಿಸಲು ಗಂಗಾ ಮಾತೆ ಭೂಮಿಗೆ ಇಳಿದಳು, ಆದ್ದರಿಂದ ಗಂಗಾ ಸಪ್ತಮಿ ತಿಥಿಯಂದು ಗಂಗಾ ಸ್ನಾನ ಮಾಡುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲವೂ ತೊಲಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಗಂಗಾ ಸ್ನಾನ ಮಾಡಿದವರಿಗೆ ಗಂಗೆಯ ಆಶೀರ್ವಾದವೂ ದೊರೆಯುತ್ತದೆ.

ಗಂಗಾ ಸಪ್ತಮಿಯ ದಿನದಂದು ಗಂಗಾ ಸ್ನಾನ ಮಾತ್ರವಲ್ಲದೆ ಈ ದಿನ ಉಪವಾಸ, ಪೂಜೆ ಹಾಗೂ ದಾನ ಮಾಡುವವರಿಗೆ ವಿಶೇಷ ಫಲಗಳ...