ಭಾರತ, ಮೇ 12 -- Back Benchers teaser: ಕಾಲೇಜು, ಕ್ಯಾಂಪಸ್ಸು, ವಿದ್ಯಾರ್ಥಿಗಳು.. ಹೀಗೆ ಫನ್‌ ಆಗಿಯೇ ನೋಡಿಸಿಕೊಂಡು ಹೋಗುವ ಕಥೆಗಳೆಂದರೆ ಈಗಿನ ಜನರೇಷನ್‌ಗೆ ಬಲು ಇಷ್ಟ. ಅದರಲ್ಲೂ ಅಲ್ಲೊಂದು ಪ್ರೀತಿ, ಹುಸಿ ಮುನಿಸು, ಕಾಡುವ ಕಥೆ, ಡಬಲ್‌ ಮೀನಿಂಗ್‌ ಡೈಲಾಗು ಇದೆಲ್ಲವನ್ನೂ ಯುವ ಪೀಳಿಗೆ ನೋಡಲು ಬಯಸುತ್ತದೆ. ಈಗ ಅಂಥದ್ದೇ ಕಥೆಯೊಂದನ್ನು ಹೊತ್ತು ಬಂದಿದೆ ಹೊಸ ತಂಡ. ಆ ಕಥೆಗೆ ಬ್ಯಾಕ್‌ ಬೆಂಚರ್ಸ್‌ ಎಂಬ ಶೀರ್ಷಿಕೆಯನ್ನೂ ಇಟ್ಟು, ಇತ್ತೀಚೆಗಷ್ಟೇ ಅದರ ಟೀಸರ್‌ ಸಹ ಬಿಡುಗಡೆ ಆಗಿದೆ. ಟೀಸರ್‌ನಲ್ಲಿರೋ ದೃಶ್ಯಗಳು, ಕಾಮಿಡಿ ಪಂಚುಗಳಿಗೆ ಪ್ರೇಕ್ಷಕರು ಮನಸೋತಿದ್ದಾರೆ.

ಇದು ಬಿ.ಆರ್ ರಾಜಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಪೂರ್ತಿ ಹೊಸಬರಿಗಾಗಿಯೇ ಹೊಸತನದಲ್ಲಿಯೇ ಹೊರತಂದಿರುವ ಸಿನಿಮಾ ಈ ಬ್ಯಾಕ್‌ ಬೆಂಚರ್ಸ್‌. ಒಂದು ವರ್ಗದ ಪ್ರೇಕ್ಷಕರಿಗಷ್ಟೇ ಸೀಮಿತ ಮಾಡದೇ, ಎಲ್ಲರನ್ನೂ ಓಲೈಸುವ ಕಥೆಯೊಂದಿಗೆ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಬ್ಯಾಕ್ ಬೆಂಚರ್ಸ್ ಇ...