ಭಾರತ, ಏಪ್ರಿಲ್ 28 -- ಬೆಂಗಳೂರು: ಕಳೆದೊಂದು ವಾರದಲ್ಲಿ ಕರ್ನಾಟಕದ (Karnataka Weather) ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತು. ಇದೇ ರೀತಿಯ ವಾತಾವರಣ ಮುಂದುವರಿಯುತ್ತೆ ಎಂದು ಜನರು ನಿರೀಕ್ಷೆ ಮಾಡಿದ್ದರು. ಆದರೆ ರಾಜಧಾನಿ ಬೆಂಗಳೂರು (Bengaluru Weather) ಸೇರಿದಂತೆ ರಾಜ್ಯದಲ್ಲಿ ಬಹುತೇಕ ಕಡೆ ರಣ ಬಿಸಿಲು ಜೋರಾಗಿದೆ. ತಾಪಮಾನ ಹೆಚ್ಚಾಗುತ್ತಿದ್ದು, ಕೆಲವೊಂದು ಜಿಲ್ಲೆಗಳಲ್ಲಿ ಇದೇ ವಾತಾವರಣ ಇಂದಿನಿಂದ (ಏಪ್ರಿಲ್ 28, ಭಾನುವಾರ) ಮೇ 1 (ಬುಧವಾರ) ರವರೆಗೆ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿ ವರದಿಯಲ್ಲಿ ತಿಳಿಸಿದೆ.

ಇವತ್ತು ರಾಜ್ಯಾದಲ್ಲಿ ಎಲ್ಲೂ ಕಡೂ ಮಳೆಯಾಗುವ ಮುನ್ಸೂಚನೆ ಇಲ್ಲ. ಒಣಹವೆ ಮುಂದುವರಿಯಲಿದೆ. ಏಪ್ರಿಲ್ 30 ರವರೆಗೆ ಇದೇ ಪರಿಸ್ಥಿತಿ ಇರಲಿದೆ. ಆದರೆ ಮೇ 1 ರಂದು ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಮುನ್ಸೂಚನೆ ಇದೆ. ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು, ಕೊಡಗು, ಮೈಸೂರು, ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮೇ 1ರ ಬುಧವಾರ ಹಗುರ...