ಭಾರತ, ಏಪ್ರಿಲ್ 30 -- ಭಾರತ ಹಲವು ವೈವಿಧ್ಯಗಳಿಂದ ಕೂಡಿರುವ ದೇಶ. ಇಲ್ಲಿನ ಪ್ರತಿ ಊರು ಒಂದಲ್ಲ ಒಂದು ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಭಾರತದ ಅಡುಗೆಗಳು ವಿಶ್ವದಲ್ಲೇ ಜನಪ್ರಿಯ. ಕೆಲವು ಪ್ರದೇಶಗಳು ರೊಟ್ಟಿ, ಪಲ್ಯ, ಚಪಾತಿಗಳಿಗೆ ಫೇಮಸ್‌ ಆದರೆ, ಇನ್ನು ಕೆಲವು ಸಾರು-ಸಾಂಬಾರುಗಳಿಗೆ ಹೆಸರುವಾಸಿ. ಕರ್ನಾಟಕದ ಇಡ್ಲಿ-ಸಾಂಬಾರು, ಮುಂಬೈ ಚಾಟ್ಸ್‌, ಗುಜರಾತಿನ ಡೋಕ್ಲಾ ಹೀಗೆ ಒಂದೊಂದು ರಾಜ್ಯಗಳು ಅದರದೇ ಆದ ಆಹಾರಗಳಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದ ಆಹಾರ ಪದ್ಧತಿ ಬಹಳ ವೈಶಿಷ್ಟ್ಯದಿಂದ ಕೂಡಿದೆ. ಅಲ್ಲಿನ ಪಾಕವಿಧಾನಗಳಲ್ಲಿ ಇರಾನ್‌, ಇರಾಕ್‌ ಮತ್ತುಅಫ್ಘಾನಿಸ್ತಾನದ ಅಡುಗೆ ಶೈಲಿಗಳ ಪ್ರಭಾವ ಕಾಣಬಹುದು. ಮೊಘಲರು ಕಾಶ್ಮೀರಕ್ಕೆ ಬಂದಾಗ ಅವರ ಜೊತೆಗೆ ಬಹಳಷ್ಟು ಪಾಕವಿಧಾನಗಳನ್ನು ತಂದರು. ಇಲ್ಲಿನ ಸ್ಥಳೀಯ ಉತ್ಪನ್ನಗಳಿಗೆ ಅವುಗಳನ್ನು ಹೊಂದಿಸಿಕೊಂಡರು. ಅದೇ ಮುಂದೆ ಕಾಶ್ಮೀರಿ ಪಾಕಪದ್ಧತಿಯ ಅಭಿವೃದ್ಧಿಗೆ ಕಾರಣವಾಯಿತು. ಇದು ಭಾರತೀಯ ಮತ್ತು ಪರ್ಷಿಯಾದ ಪಾಕಪದ್ಧತಿಗಳ ಮಿಶ್ರಣವಾಗಿದೆ. ದಮ್‌ ಆಲೂ, ರೋಗನ್‌, ಜೋಶ್‌, ಕಾಶ್ಮ...