Bangalore, ಏಪ್ರಿಲ್ 20 -- ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡಿನ ಜಿಲ್ಲೆಗಳು ಹಾಗು ಉತ್ತರ, ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏ.23ರ ಮಂಗಳವಾರದವರೆಗೂ ಮಳೆಯಾಗಲಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುಂದಿನ ವಾರದ ಮಳೆಯ ಮುನ್ಸೂಚನೆಯನ್ನು ನೀಡಿದೆ. ಈ ಪ್ರಕಾರ ಏ.20ರ ಶನಿವಾರದಿಂದ ನಾಲ್ಕು ದಿನ ಕಾಲ ಮಳೆಯಾಗಲಿದೆ. ಆನಂತರ ಒಣಹವೆಯ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರದಲ್ಲೂ ಶನಿವಾರ ಮಳೆಯ ಸೂಚನೆಯಿದೆ ಎಂದು ತಿಳಿಸಲಾಗಿದೆ. ಗುರುವಾರ ರಾತ್ರಿ ಹಾಗೂ ಶುಕ್ರವಾರವೂ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು, ಸಿಡಿಲಿನ ಮಳೆಯ ಅನುಭವವೂ ಹಲವು ಜಿಲ್ಲೆಗಳಲ್ಲಿ ಆಗಿದೆ.

ಇದನ್ನೂ ಓದಿರಿ: Mangalore News: ಬೆಳ್ತಂಗಡಿಯಲ್ಲಿ ಮನೆ ಮಾಲಕಿ ಮೇಲೆಯೇ ಸಾಕಿದ ನಾಯಿ ದಾಳಿ; ಮಹಿಳೆ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಗುರುವಾರ ರಾತ್ರಿ ಶುಕ್ರವಾರದಂದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ನಿಪ...